ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ದೊನ್ನೆ ಬಿರಿಯಾನಿ ಪ್ಯಾಲೇಸ್ ಲೋಕಾರ್ಪಣೆ

Kaverinews | Published on: | Views: 30
ಕುಶಾಲನಗರ
ದೊನ್ನೆ ಬಿರಿಯಾನಿ ಪ್ಯಾಲೇಸ್ ಲೋಕಾರ್ಪಣೆ
ಕುಶಾಲನಗರ ಸಮೀಪ ಕೊಪ್ಪ ವಾಣಿ ಬೋಪಯ್ಯ ಆರ್ಕೇಡ್ ನಲ್ಲಿ ದೊನ್ನೆ ಬಿರಿಯಾನಿ ಪ್ಯಾಲೇಸ್ ಲೋಕಾರ್ಪಣೆ

ಕುಶಾಲನಗರ,

ಪ್ರವಾಸಿಗರಿಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವುದರೊಂದಿಗೆ ಸೇವಾ ಮನೋಭಾವದೊಂದಿಗೆ ಆತಿಥ್ಯ ನೀಡಿದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣಲು ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದರಾದ ಐಮುಡಿಯಂಡ ರಾಣಿ ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರ ಸಮೀಪ ನೂತನವಾಗಿ ಆರಂಭಗೊಂಡ ದೊನ್ನೆ ಬಿರಿಯಾನಿ ಪ್ಯಾಲೇಸ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರವಾಸಿಗರಿಗೆ ಭದ್ರತೆ ಜೊತೆಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಬಗ್ಗೆ ವ್ಯಾಪಾರ ಉದ್ಯಮಿಗಳು ಕಾಳಜಿ ವಹಿಸಬೇಕಾಗಿದೆ ಎಂದರು.

ಈ ಸಂದರ್ಭ ವಾಣಿ ಬೋಪಯ್ಯ ಆರ್ಕೆಡ್ ಮಾಲೀಕರಾದ ಮುಂಡಂಡ ಪಿ.ಬೋಪಯ್ಯ, ವಾಣಿ ಬೋಪಯ್ಯ, ವರುಣ್ ಬೋಪಯ್ಯ, ದೊನ್ನೆ ಬಿರಿಯಾನಿ ಪ್ಯಾಲೆಸ್ ಬ್ರಾಂಡ್ ಮುಖ್ಯಸ್ಥರಾದ ವರುಣ್ ಗೌಡ, ಜೀವನ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್.ಚಂದ್ರಮೋಹನ್, ಬೆಳಗಾರರಾದ ಮ್ಯಾಕ್ ಮಾಚಯ್ಯ, ಕುಶಾಲನಗರ ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಪತ್ರಕರ್ತೆ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.

Share this article