ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕುಸಿತ .

Kaverinews | Published on: | Views: 66
ಕೊಡಗು
ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಕುಸಿತ .
ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟಿನ ನೀರಿನ ಸಂಗ್ರಹ ಮಟ್ಟ 2853.20.ಜಲಾಶಯ ತುಂಬಲು ಇನ್ನೂ 13ಅಡಿಗಳಷ್ಟು ಪ್ರಮಾಣದ ನೀರು ಹರಿದು ಬರಬೇಕಾಗಿದೆ.

ಕುಶಾಲನಗರ,

ಕಳೆದ ಕೆಲವು ದಿನಗಳಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕ್ಷೀಣಗೊಂಡಿದ್ದು ಜಲಾಶಯಕ್ಕೆ ಒಂದು ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಇದ್ದು ಜಲಾಶಯದ ನೀರಿನ ಸಂಗ್ರಹ ಮಟ್ಟ 2845.98 ಅಡಿಗಳಷ್ಟು ತಲುಪಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟಿನ ನೀರಿನ ಸಂಗ್ರಹ ಮಟ್ಟ 2853.20 ಆಗಿದ್ದು ಈ ಅವಧಿಯಲ್ಲಿ ಜಲಾಶಯದಿಂದ 7000 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿತ್ತು.

ಕಳೆದ ವರ್ಷ ಜೂನ್ ಪ್ರಥಮ ವಾರದಲ್ಲಿ ಅಣೆಕಟ್ಟು ತುಂಬಿ ಹೆಚ್ಚುವರಿ ನೀರನ್ನು ನದಿಗೆ ಅಣೆಕಟ್ಟಿನ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ಹರಿಸಲಾಗಿತ್ತು.

ಜಲಾಶಯ ತುಂಬಲು ಇನ್ನೂ 13ಅಡಿಗಳಷ್ಟು ಪ್ರಮಾಣದ ನೀರು ಹರಿದು ಬರಬೇಕಾಗಿದೆ.

ಕಾವೇರಿ ನದಿಯಲ್ಲಿ ಕೂಡ ನೀರಿನ ಹರಿವಿನ ಪ್ರಮಾಣ ಬಹುತೇಕ ಕುಸಿತ ಕಂಡು ಬಂದಿದೆ.

Share this article